ಮಂಡ್ಯ(ಜ:07): ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಎಸ್ ಬಿ ಐ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕಿ ಎಚ್.ಜೆ ರಮಾ ನಾಪತ್ತೆಯಾಗಿದ್ದಾರೆ. ಶಾಖೆಯ ಬೀಗದ ಕೀಗಳನ್ನು ಸಹೋದ್ಯೋಗಿಗೆ ನೀಡಿ ತಮ್ಮ ಮೊಬೈಲ್ ಫೋನ್ ಅನ್ನು ತಮ್ಮ ಡ್ರಾನಲ್ಲಿ ಇಟ್ಟು ಹೋಗಿದ್ದಾರೆ.

ರಮಾ ಅವರ ಪತಿ ಕೃಷ್ಣಮೂರ್ತಿ ಪೋಲಿಸ್ ಠಾಣೆಗೆ ದೂರು ನೀಡಿದ್ದು,ಪೋಲಿಸರು ತನಿಖೆ ಆರಂಭಿಸಿದ್ದಾರೆ. ಮೊಬೈಲ್ ತೆಗೆದುಕೊಂಡು ಹೋಗದ ಕಾರಣ ಹುಡುಕಾಟ ಕಷ್ಟವಾಗಿದ್ದು,ಪೊಲೀಸರು ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.