ಮುಂಬೈ(ಫೆ:11): ದೇಶದ ಯುವಕರನ್ನು ಹಾಳು ಮಾಡುತ್ತಿರುವ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡ್ರಗ್ ವಿರೋಧಿ ಸಂಸ್ಥೆಗಳ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್ ಕೈಜೋಡಿಸಿದ್ದಾರೆ. ಯುವಕರಲ್ಲಿ ಡ್ರಗ್ಸ್ ವ್ಯಸನವನ್ನು ದೂರಮಾಡಬೇಕು,ಡ್ರಗ್ಸ್ ಮುಕ್ತ ಭಾರತ ಮಾಡಬೇಕೆಂದು ಸಂಜಯ್ ದತ್ ಇಚ್ಛಿಸಿದ್ದಾರೆ.

ಈ ವಿಚಾರವಾಗಿ ತಮ್ಮ ಟ್ವಿಟ್ಟರ್ ಮೂಲಕ ಅಭಿಪ್ರಾಯಿಸಿರುವ ಸಂಜಯ್ ದತ್,ಭಾರತದಿಂದ ಡ್ರಗ್ಸ್ ವ್ಯಸನಕ್ಕೆ ಏನಾದರೂ ಮಾಡಲು ನಾನು ಯಾವಾಗಲೂ ಬಯಸಿದ್ದೆ,ಡ್ರಗ್ ಫ್ರೀ ಇಂಡಿಯಾ ಸಂಸ್ಥೆಯು ಡ್ರಗ್ಸ್ ನಿರ್ಮೂಲನೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ. ಈ ವಿಷಯವು ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಭಾರತದ ಯುವಕರಿಗೆ ಸಹಾಯ ಮಾಡಲು ನಾನು ಎಂದಿಗೋ ಸಿದ್ಧನಿದ್ದೇನೆ ಎಂದಿದ್ದಾರೆ.