ಬೆಂಗಳೂರು(ಜ:೦೧): ಸಿಹಿ ಕಹಿ ಎರಡರ ನಡುವೆ ೨೦೧೮ ರಲ್ಲಿ ೨೫೦ಕ್ಕೂ ಹೆಚ್ಚು ಚಿತ್ರಗಳು ಉತ್ತಮ ಲಾಭ ತೆಗೆದಿದ್ದ ಸ್ಯಾಂಡಲ್‌ವುಡ್‌, ೨೦೧೯ರಲ್ಲಿ ಇದಕ್ಕಿಂತ ಹೆಚ್ಚು ಸಿನಿಮಾಗಳು ರಿಲೀಸ್ ಆಗುವ ಸೂಚನೆಗಳಿವೆ.
ಅನೇಕ ಆಶಯಗಳನ್ನು ಹೊಂದಿರುವ ಚಿತ್ರರಂಗ ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ತವಕದಲ್ಲಿದೆ.
ಇನ್ನೊಂದು ವಿಶೇಷ ಏನೆಂದರೆ ಈ ವರ್ಷ ಬಿಗ್ ಬಜೆಟ್ ಚಿತ್ರಗಳ ಪಟ್ಟಿಯೇ ಇದೆ. ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾಗಳಿಂದ ಮಾರುಕಟ್ಟೆ ಮತ್ತಷ್ಟು ಹಿಗ್ಗಲಿದೆ. ಅಷ್ಟೇ ಅಲ್ಲದೆ ಸ್ಯಾಂಡಲ್‌ವುಡ್‌ ಸಿನೆಮಾ ರಂಗ ಮಾತ್ರವಲ್ಲದೇ ಇತರೆ ಚಿತ್ರರಂಗಗಳ ಕಣ್ಣು ಕನ್ನಡದ ನಿರ್ದೇಶಕರು, ನಟ ನಟಿಯರ ಮೇಲೆ ಬಿದ್ದಿದೆ.