ನವದೆಹಲಿ:(ಫೆ26): ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಈ ಭಾರತೀಯ ಸೇನೆ ಪ್ರತಿಕಾರವನ್ನು ತೀರಿಸಿರುವುದು, ಭಾರತೀಯರ ಸಂಭ್ರಮಾಚರಣೆಗೆ ಕಾರಣವಾಗಿದೆ.

ಭಾರತೀಯ ಸೇನೆಯಿಂದ ಉಗ್ರರ ನೆಲೆಗಳು ದ್ವಂಸಗೊಂಡಿರುವುದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಪಟಾಕಿಯನ್ನು ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ.

ರಾಜ್ಯದಲ್ಲಿ ಮಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ಭಾರತೀಯ ಸೇನೆ ಮಾಡಿದ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಯೋಧರಿಗೆ ದೊಡ್ಡ ಸಲಾಂ ಹೇಳಲಾಗುತ್ತಿದೆ.

ಇಂದು ದೇಶದಲ್ಲಿ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ಭಾರತೀಯ ಸೇನೆ, ವಾಯುಪಡೆಗೆ, ಪ್ರಧಾನಿ ಮೋದಿ ಪರ ಜನರ ಘೋಷಣೆಗಳು ಮೊಳಗಿವೆ.