ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್ ಸಿನಿಮಾದ ಟ್ರೈಲರ್ ನೆನ್ನೆ ಬಿಡುಗಡೆಯಾದ ಒಂದು ಗಂಟೆಯೊಳಗೆ ಬಾರೀ ಮೆಚ್ಚುಗೆ ಪಡೆಯುತ್ತಿದೆ.

ಇನ್ನೂ ಬಾಲಿವುಡ್ ನಟ ಸಲ್ಮಾನ್‍ಖಾನ್ ಟ್ರೈಲರ್ ನೋಡಿ ಒಂದ್ ಸಲಾಂ ಹೊಡೆದಿದ್ದಾರೆ. ಹೌದು ಬಾಡಿ ಬಿಲ್ಡರ್‍ರಾಗಿ ಕಾಣಿಸಿಕೊಂಡ ಸುದೀಪ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ. ಬಾಲಿವುಡ್‍ನಲ್ಲಿಯೂ ಸಾಲುಸಾಲಾಗಿ ಹೊಗಳಿಕೆ ಬರುತ್ತಿರುವುದು ನೋಡಬಹುದು.

ಇನ್ನು ಸಲ್ಲು ಬಾಯಿ ತಮ್ಮ ಟ್ವಿಟರ್‍ನಲ್ಲಿ ಫೈಲ್ವಾನ್ ಚಿತ್ರದ ಟೀಸರ್ ನೋಡಿ ಚಿತ್ರ ತಂಡದ ಕೆಲಸಕ್ಕೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.

ಚಿತ್ರತಂಡಕ್ಕೆ ಸ್ಪೂರ್ತಿನೀಡುವುದರ ಸಲುವಾಗಿ “ಮ್ಯಾನ್ ಟು ಪೈಲ್ವಾನ್‍ಗೆ ಆಲ್-ದಿ-ಬೆಸ್ಟ್ ಆಡ್ ಕಂಗ್ರಾಟ್ಸ್” ಎಂದು ಸಲ್ಲು ಟ್ವೀಟ್ ಮಾಡಿದ್ದಾರೆ.