ಬೆಂಗಳೂರು:(ಜ30): ಮದ್ಯ ನಿಷೇಧ ಮಾಡುವಂತೆ ಮಹಿಳೆಯರು ಇಂದು ಶಕ್ತಿಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಈಗಾಗಲೆ ಮದ್ಯ ನಿಷೇಧ ಆಂದೋಲನ ಒಕ್ಕೂಟದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, “ಬೆಂಗಳೂರು ಚಲೋ” ಪಾದಯಾತ್ರೆ ಇಂದು ಬೆಂಗಳೂರನ್ನು ತಲುಪಿದೆ.

ಬೆಳಗ್ಗೆ 11 ಗಂಟೆಗೆ ಶಕ್ತಿ ಸೌಧವನ್ನು ಮುತ್ತಿಗೆ ಹಾಕಲಿದ್ದಾರೆ. ಒಟ್ಟು 19 ಜಿಲ್ಲೆಯಿಂದ ಎರಡು ಸಾವಿರ ಮಹಿಳೆಯರು ಹಾಗು ಐದುನೂರು ಜನ ಪುರುಷರು 11 ದಿನಗಳ ಕಾಲ ಪಾದಯಾತ್ರೆಯನ್ನು ಮಾಡಿ ಇಂದು ಬೆಂಗಳೂರಿನ ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಈಗಾಗಲೆ ಮದ್ಯಪಾನದಿಂದ ಹಲವಾರು ಮಹಿಳೆಯರ ಜೀವ, ಜೀವನ ಬಲಿಯಾಗಿದೆ. ಜೊತೆಗೆ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಅರಿತು ಪಾದಯಾತ್ರೆ ಕೈಗೊಳ್ಳಲಾಗಿದೆ.