ಮೊಹಾಲಿ(ಮಾ:11): ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರರಾಗಿ ದಾಖಲೆ ನಿರ್ಮಿಸಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಈಗಿನ ಆರಂಭಿಕ ಜೋಡಿ ಮುರಿದಿದೆ. ಅವರಿಬ್ಬರ ನಿವೃತ್ತಿಯ ಬಳಿಕ ಭಾರತ ತಂಡದ ಖಾಯಂ ಓಪನರ್ಗಳಾಗಿರುವ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಏಕದಿನ ಪಂದ್ಯದಲ್ಲಿ ಅವರ ದಾಖಲೆ ಮುರಿದಿದ್ದಾರೆ.

ಸಚಿನ್ ಹಾಗೂ ಸೆಹ್ವಾಗ್ ಹೆಸರಿನಲ್ಲಿದ್ದ 4387 ರನ್ ಗಳ ಜೊತೆಯಾಟದ ದಾಖಲೆಯನ್ನು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಬದಿಗೊತ್ತಿದ್ದಾರೆ. ಸೌರವ್ ಗಂಗೂಲಿ ಹಾಗೂ ಸಚಿನ್ ಜೋಡಿ ಮೊದಲನೇ ಸ್ಥಾನದಲ್ಲಿದ್ದು,ರೋಹಿತ್ ಹಾಗೂ ಧವನ್ ಎರಡನೇ ಸ್ಥಾನದಲ್ಲಿದ್ದಾರೆ.