ಸಿಡ್ನಿ(ಮಾ:16): ಇನ್ನು ಕೆಲವೇ ತಿಂಗಳಿನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು,ಭಾರತ ತಂಡಕ್ಕೆ 4 ನೇ ಕ್ರಮಾಂಕದಲ್ಲಿ ಆಡುವ ಸೂಕ್ತ ಆಟಗಾರನ ಆಯ್ಕೆಯ ಗೊಂದಲ ಸರಿಹೋಗುವಂತೆ ಕಾಣುತ್ತಿಲ್ಲ,ವಿಶ್ವಕಪ್ ಗೆ ಭಾರತದ 4 ನೇ ಕ್ರಮಾಂಕದ ಆಟಗಾರನನ್ನು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಆರಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಬೇರೆ ಬೇರೆ ಆಟಗಾರರನ್ನು ತಂದು ಬಿಸಿಸಿಐ ಪ್ರಯೋಗ ನಡೆಸಿತಾದರೂ ಯಾರೂ ಸ್ಥಿರ ಎಂಬಂತೆ ಕಾಣಲಿಲ್ಲ.ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಂಬಾಟಿ ರಾಯುಡು, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಈ ಮೂವರು ಆಟಗಾರರು 4ನೇ ಕ್ರಮಾಂಕದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ರಿಕಿ ಪಾಂಟಿಂಗ್ ಅವರು ಯುವ ಆಟಗಾರ ಶ್ರೇಯಸ್ ಐಯ್ಯರ್ 4ನೇ ಕ್ರಮಾಂಕಕ್ಕೆ ಸೂಕ್ತ ಎಂದಿದ್ದಾರೆ.

ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಪಾಂಟಿಂಗ್ ಅವರಿಗೆ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅರಿವಿದೆ,ಹೀಗಾಗಿ ಶ್ರೇಯಸ್ ಅವರೇ 4 ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಲು ಸೂಕ್ತ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.