ಲಂಡನ್(ಫೆ:12):ತಮ್ಮನ್ನು ಸಾಹಸ ಕಾರ್ಯಗಳಲ್ಲೇ ತೊಡಗಿಸಿಕೊಂಡು ಹೆಸರಾಗಿರುವ ವರ್ಜಿನ್ ಕಂಪನಿಯ ಮಾಲಿಕ ರಿಚರ್ಡ್ ಬ್ರಾನ್ಸನ್ ಇನ್ನು ನಾಲ್ಕೈದು ತಿಂಗಳಲ್ಲಿ ಚಂದ್ರನ ಮೇಲೆ ಪಾದಾರ್ಪಣೆ ಮಾಡಲಿದ್ದಾರೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ 50ನೇ ವರ್ಷದ ನೆನಪಿಗಾಗಿ ಚಂದ್ರಲೋಕಕ್ಕೆ ಹೋಗುವ ಆಸೆ ಅವರಿಗಿದ್ದು,ಹೀಗಾಗಿ ತಯಾರಿ ನಡೆಸುತ್ತಿದ್ದೇನೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.

ಜುಲೈ ತಿಂಗಳ ವೇಳೆಗೆ ಪ್ರಯಾಣ ನಡೆಸುವ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಯೋಜನೆ ನಡೆಸಿದ್ದು,ಅದೇ ತಿಂಗಳಲ್ಲಿ ಚಂದ್ರಲೋಕಕ್ಕೆ ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅವರ ಸ್ವಂತ ವರ್ಜಿನ್ ಗ್ಯಾಲೆಕ್ಟಿಕ್ ನೌಕೆಯಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದ್ದು,ಇಬ್ಬರು ಪೈಲಟ್ ಗಳು ನೌಕೆಯನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಹವಾಮಾನದ ಪರಿಸ್ಥಿತಿಗಳ ಆಧಾರದ ಮೇಲೆ ನೌಕೆಯ ಮುಂದಿನ ಪರೀಕ್ಷೆಯನ್ನು ಫೆ 20ಕ್ಕೆ ಮಾಡಲಾಗುತ್ತಿದೆ.