ಮುಂಬೈ(ಫೆ:04): ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ರಿಲಯನ್ಸ್ ಜಿಒ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆರಂಭದಿಂದಲೂ ಉಳಿದ ಎಲ್ಲಾ ಟೆಲಿಕಾಂ ಕಂಪನಿಗಳ ನಿದ್ರೆಗೆಡಿಸಿರುವ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಿದೆ.

ರಿಲಯನ್ಸ್ ಜಿಯೋ ನ ಎರಡು ಯೋಜನೆಗಳು ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ. ಹೆಚ್ಚಿನ ಅವಧಿ ಹಾಗೂ ಡೇಟಾ,ಅನಿಯಮಿತ ಕರೆ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಈ ಆಫರ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ,ಗ್ರಾಹಕರನ್ನು ಸೆಳೆಯುತ್ತಿರುವ ರಿಲಯನ್ಸ್ ಜಿಯೋ ದ ಎರಡು ಆಫರ್ ಗಳೆಂದರೆ 398 ರೂ. ಹಾಗೂ 399 ರೂ ಗಳದ್ದಾಗಿದೆ.

398 ರೂ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಡೇಟಾ ದೊರೆಯಲಿದೆ ಇದು 70 ದಿನಗಳ ಸಿಂಧುತ್ವ ಹೊಂದಿದೆ,ಇನ್ನು 399 ರೂ ಯೋಜನೆಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ದೊರೆಯಲಿದ್ದು,ಇದು 84 ದಿನಗಳ ಸಿಂಧುತ್ವ ಹೊಂದಿದೆ.