ಮುಂಬೈ(ಜ,29): ಚೀನಾ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ಶಿಯೋಮಿ ರೆಡ್‍ಮಿ ನೋಟ್ 7 ಸ್ಮಾರ್ಟ್‍ಫೋನ್ ಭಾರತಕ್ಕೆ ಕಾಲಿಡಲು ಸಿದ್ಧವಾಗಿದೆ.

ಭಾರತದ ಶಿಯೋಮಿ ಕಂಪೆನಿ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ರೆಡ್‍ಮಿ ನೋಟ್ 7 ಬರುವಿಕೆಯನ್ನು ಸ್ಪಷ್ಟಪಡಿದ್ದಾರೆ. ಇದೇ ಫೆಬ್ರವರಿಯಲ್ಲಿ ರೆಡ್‍ಮಿ ನೋಟ್ 7 ಸ್ಮಾರ್ಟ್‍ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಮಾರುಕಟ್ಟೆಯನ್ನು ನಿಯಂತ್ರಿಸುವ ಸ್ಮಾರ್ಟ್‍ಫೋನ್ ಇದಾಗಿರಲಿದೆ ಎಂದು ಟ್ವೀಟ್ ಮಾಡಿ, ರೆಡ್‍ಮಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ಮನುಕುಮಾರ್ ಜೈನ್ ಮತ್ತು ಶಿಯೋಮಿ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಲೀ ಜುನ್ ಅವರು ರೆಡ್‍ಮಿ ನೋಟ್ 7 ಹಿಡಿದು ಫೋಸ್ ನೀಡಿರುವ ಚಿತ್ರವನ್ನು ಫೋಸ್ಟ್ ಮಾಡಿದ್ದಾರೆ.

ಚೀನಾದಲ್ಲಿ ಮಾತ್ರ ಮೊದಲು ಬಿಡುಗಡೆಯಾಗಿದ್ದ ‘ರೆಡ್‍ಮಿ ನೋಟ್ 7’ ಪೋನ್ ಬೆಲೆ ‘999 ರೂ ಗಳಿಂದ ಆರಂಭವಾಗಿತ್ತು. ಈಗ ಭಾರತದಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಗೆ ರೆಡ್ ಮಿ ನೋಟ್ 7 ಸ್ಮಾರ್ಟ್‍ಫೋನ್‍ನ್ನು ಬಿಡುಗಡೆ ಮಾಡುವ ಪ್ಲಾನ್‍ನ್ನು ಕಂಪನಿ ಹೊಂದಿದೆ ಎನ್ನಲಾಗಿದೆ.