ನವದೆಹಲಿ:(ಫೆ27): ಭಾರತ ಪಾಕ್‍ನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಬೆನ್ನಲಿಯೆ ಪಾಕ್ ಗಡಿ ಉಲ್ಲಂಘಿಸಿ ಒಳ ನುಗ್ಗಿದ ಪಾಕ್ ಯುದ್ಧ ವಿಮಾನಗಳನ್ನು ಭಾರತೀಯ ವಾಯು ಪಡೆ ಹೊಡೆದೋಡಿಸಿದೆ.

ಭಾರತದ ಸುಖೋಯ್ ಯುದ್ಧ ವಿಮಾನ ಪಾಕ್‍ನ ಎಫ್-16 ಯುದ್ಧ ವಿಮಾನಗಳನ್ನು ಹೊಡೆದೋಡಿಸಿದೆ. ಇನ್ನು ಭಾರತದಲ್ಲಿ ಪ್ರತಿಯೊಂದು ಸೈನ್ಯಕ್ಕೂ ಅಲರ್ಟ್ ಆಗಿರುವಂತೆ ಘೋಷಣೆ ಮಾಡಲಾಗಿದೆ.

ದೇಶದ ಒಳಗೆ ಹೆಚ್ಚು ಜನನಿಬೀಡಿತ ಪ್ರದೇಶಗಳಲ್ಲಿ ಬಗಿ ಬಂದೋಬಸ್ತ್ ಮಾಡಲು ಸೂಚಿಸಲಾಗಿದೆ. ಮೆಟ್ರೋ ಸ್ಟೇಷನ್, ಮಾಲ್‍ಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭಾರತ ಪಾಕ್ ಗಡಿ ಭಾಗದಲ್ಲಿ ಹೆಚ್ಚಿನ ಯೋಧರನ್ನು ನೇಮಿಸಲಾಗಿದೆ. ಇನ್ನು ಭಾರತದ ಮೂರು ಸೇನಾ ಪಡೆಯಗಳು ಹೈ ಅಲರ್ಟ್‍ಟಾಗಿವೆ.