ಮೆಲ್ಬೋರ್ನ್(ಡಿ:೨೯): ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಸರಣಿಯೊಂದರಲ್ಲಿ ಅತಿ ಹೆಚ್ಚು ಡಿಸ್ಮಿಸಲ್ ಪಡೆದ ಭಾರತೀಯ ವಿಕೆಟ್ ಕೀಪರ್ ದಾಖಲೆಯನ್ನು ಪಂತ್ ಬದಿಗೊತ್ತಿದ್ದಾರೆ. ಮೊದಲು ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್‌ಗಳನ್ನು ಹಿಡಿದಿರುವ ಪಂತ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ದಾಖಲೆ ಬರೆದಿದ್ದರು,ಇದೀಗ ಸರಣಿಯಲ್ಲಿ ೧೯ ಡಿಸ್ಮಿಸಲ್ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ.