ನವದೆಹಲಿ(ಫೆ:13): ಟೀಮ್ ಇಂಡಿಯಾದ ವಿಕೆಟ್ ಕೀಪರ್,ಬ್ಯಾಟ್ಸಮನ್ ಎಂ ಎಸ್ ಧೋನಿ ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್ ನಲ್ಲಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಉತ್ತಮ ಕಮ್ಬ್ಯಾಕ್ ಮಾಡಿದರು. ಮೂರು ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಧೋನಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಧೋನಿಯ ಈ ಅದ್ಭುತ ಪ್ರದರ್ಶನದ ಗುಟ್ಟಿನ ಸತ್ಯ ಬಯಲಾಗಿದೆ,ಧೋನಿ ಫಾರ್ಮ್ ಕಂಡುಕೊಳ್ಳಲು ಕಾರಣ ಅವರ ಬ್ಯಾಟ್ ನ ವಿನ್ಯಾಸ ಎಂದು ಮೂಲಗಳಿಂದ ತಿಳಿದುಬಂದಿದೆ. ಧೋನಿ ಅವರು ಸದ್ಯ ಸ್ಪಾರ್ಟಾನ್ ಕಂಪನಿಯ ಬ್ಯಾಟ್ ಉಪಯೋಗಿಸುತ್ತಿದ್ದು,ಇದನ್ನು ವಿಶೇಷವಾಗಿ ವಿನ್ಯಾಸಿಸಲಾಗಿದೆ. ಧೋನಿ ಶೈಲಿಗೆ,ಅವರ ಶಕ್ತಿಗೆ ಒಪ್ಪುವಂತೆ ಬ್ಯಾಟ್ ತಯಾರಿಸಲಾಗಿದೆ. ಬ್ಯಾಟ್ ನ ಹಿಂಬಾಗದಲ್ಲಿ ಹಾಗೂ ಕೆಳಬಾಗದಲ್ಲಿ ಮರದ ಅಂಶ ಬಳಸಲಾಗಿದ್ದು, ಇದು ಹೆಚ್ಚಿನ ಶಕ್ತಿ ಒದಗಿಸುತ್ತದೆ,ಇದೇ ಇತ್ತೀಚಿನ ದಿನಗಳ ಧೋನಿ ಯಶಸ್ಸಿಗೆ ಕಾರಣ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.