ಬೆಂಗಳೂರು:(ಜ18): ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಲು ಇಸ್ರೋ ತಯಾರಿ ನಡೆಸುತ್ತಿದ್ದು, ಉಪಗ್ರಹ ಉಡಾವಣೆಯ ಪರೀಕ್ಷೆಯಲ್ಲಿ ಇವರನ್ನು ಕಳುಹಿಸಲು ರೆಡಿಯಾಗಿದೆ.
ಹಾಗಾದ್ರೆ ಅವರ್ಯಾರಪ್ಪ ಅನಿಸಿರುತ್ತೆ ಅಲ್ವ ಬೇರೆಯ್ಯಾರು ಅಲ್ಲಾ ಮಾನವ ರೂಪದ ರೋಬೋಟ್ ಅನ್ನು ಕಳುಹಿಸಲಾಗುತ್ತಿದೆ.
ಈಗಾಗಲೇ ಮಾನವ ರೂಪದ ರೋಬೋಟ್ಗಳು ಸಿದ್ಧವಾಗಿದ್ದು, ಪರೀಕ್ಷಿಸುವ ಮೊದಲು ಉಪಗ್ರಹವನ್ನು ಖಾಲಿ ಕಳುಹಿಸದೆ ಈ ರೋಬೋಟ್ಗಳನ್ನು ಕಳುಹಿಸಲಾಗುವುದು. ಈ ರೋಬೋಟ್ ಮನುಷ್ಯರು ಮಾಡುವಂತಹ ಎಲ್ಲಾ ಕೆಲಸವನ್ನು ಮಾಡುತ್ತದೆ ಎನ್ನಲಾಗಿದೆ.
ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ ಎರಡು ಬಾರಿ ರೋಬೋಟ್ಗಳನ್ನು ಕಳುಹಿಸುವುದರ ಮೂಲಕ ಪ್ರಯೋಗ ಮಾಡಲಾಗುವುದು ಎಂದು ಇಸ್ರೋದ ಅಧ್ಯಕ್ಷರಾದ ಕೆ.ಶಿವನ್ ತಿಳಿಸಿದ್ದಾರೆ.