ಬೆಂಗಳೂರು:(ಜ18): ನಿರ್ದೇಶಕ ಸಿಂಪಲ್ ಸುನಿ ನಿರ್ದೇಶಿಸಿರುವ ಬಜಾರ್ ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಅಂದರೆ ಫೆಬ್ರವರಿ 01 ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

ಪಾರಿವಾಳ ಜೂಜಾಟ ಮತ್ತು ಸ್ಪರ್ಧೆಯ ಕತೆಯನ್ನು ಒಳಗೊಂಡಿರುವ ಸಿನಿಮಾವಾಗಿದ್ದು, ಈ ಸಿನಿಮಾದ ಮೂಲಕ ನಟ ಧ್ವನೀರ್ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ಅಧಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತಿಮೈ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದ ಲವ್ ಫೇಲ್ಯೂರ್ ಹಾಡೊಂದು ಸಖತ್ ಫೇಮಸ್ ಆಗಿದೆ. ಹೌದು ” ಲವ್ ಫೇಲ್ಯೂರ್ ಆಗೋಯ್ತು ನನಗೆ, ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ ಏನೇನೋ ಬೈದ್ರೂ ಚಂದಾನೆ ನನಗೆ” ಎಂಬ ಹಾಡು ಹೆಚ್ಚು ಸದ್ದು ಮಾಡಿದೆ.

ಇನ್ನೇನು ಬಜಾರ್ ಚಿತ್ರ ಬಜಾರ್‍ಗೆ ಬರಲು ರೆಡಿಯಾಗಿದ್ದು, ಸಿಂಪಲ್ ಸುನಿಯ ಬಜಾರ್ ಚಿತ್ರ ಅಭಿಮಾನಿಗಳ ಮನ ಗೆಲ್ಲುತ್ತಾ ಎಂಬುದನ್ನು ಕಾದ್ ನೋಡ್ಬೇಕಿದೆ.