ಮುಂಬೈ:(ಜೂನ್06): ಆರ್‍ಬಿಐ ಬ್ಯಾಂಕ್‍ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.25 ರಷ್ಟು ಇಳಿಕೆ ಮಾಡಿದೆ

ಆರ್.ಬಿ.ಐ ಈ ರೆಪೊ ದರವನ್ನು ಇಳಿಕೆ ಮಾಡುತ್ತಿರುವುದು ವರ್ಷದಲ್ಲಿ ಇದು ಮೂರನೇ ಬಾರಿಯಾಗಿದೆ.

ಹಣಕಾಸು ಸಮಿತಿ ಸಭೆಯಲ್ಲಿ ಆರ್‍ಬಿಐ ನ ಗೌವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ 6 ಜನ ಸದಸ್ಯರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಆರ್ಥಿಕತೆಯಲ್ಲಿ ಬೆಳವಣೆಗೆ ಸಾಧಿಸಲು ಹಾಗೂ ಆರ್ಥಿಕ ಬೆಳವಣಿಗೆ ವೇಗತಿಯಲ್ಲಿ ಸಾಗುವ ಸಲುವಾಗಿ ರೆಪೊ ದರವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.