ಬೆಂಗಳೂರು(ನ.13) ಹಿರಿಯ ಖ್ಯಾತ ಪತ್ರಕರ್ತ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ, ಸಾಹಿತಿ ಹಾಗೂ ಚಲನಚಿತ್ರ ನಿರ್ಮಾಪಕರು, ನಟರು ಆಗಿದ್ದಂತಹ ರವಿ ಬೆಳಗೆರೆ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆಯು ಇಂದು ೪ ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ರವಿ ಬೆಳಗೆರೆ ಅವರ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಹೇಳಲಾಗಿದೆ. 1985 ಮಾರ್ಚ್ 15ರಂದು ಬಳ್ಳಾರಿಯಲ್ಲಿ ಹುಟ್ಟಿದ ಇವರು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದರೂ ಎಂಎ ಪದವಿ ಪಡೆದು ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು.

1980ರಲ್ಲಿ ಅವರ ಸಾಹಿತ್ಯ ಕೃಷಿ ಆರಂಭಿಸಿ ಅಲ್ಲಿಂದ ಅವರು 3 ಕಥಾ ಸಂಕಲನ, 1 ಕವನಸಂಕಲನ, 11 ಕಾದಂಬರಿ, 8 ಅನುವಾದ ಕೃತಿ, 11 ಐತಿಹಾಸಿಕ ಕೃತಿ, 4 ಜೀವನಕಥೆ, 10 ಕ್ರೈಮ್ ಕೃತಿಗಳು ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನ ಅವರು ರಚಿಸಿ ಬಿಡುಗಡೆ ಮಾಡಿದ್ಧಾರೆ.