ಬೆಂಗಳೂರು(ಜ:೦೧): ನಟ ದರ್ಶನ ಅಭಿನಯದ ಯಜಮಾನ ಚಿತ್ರದ ಹಾಡಿನ ಶೂಟಿಂಗ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ.

ಯಜಮಾನ ಶೂಟಿಂಗ್ ಬಹುತೇಕ ಮುಗಿದಿದ್ದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಅಪಘಾತದಲ್ಲಿ ದರ್ಶನ್ ಕೈಗೆ ಪೆಟ್ಟಾಗಿದ್ದರಿಂದ ವಿಶ್ರಾಂತಿ ತೆಗೆದುಕೊಂಡಿರುವ ದರ್ಶನ್ ಇದೀಗ ಸಾಂಗ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಹಾಡು ಇದಾಗಿದೆ.