ಮೊಹಾಲಿ(ಮಾ:11): ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದ ಸೋಲಿಗೆ ಧೋನಿಯ ಅನುಪಸ್ಥಿತಿ ಕಾರಣವಾಗಿದೆ. ಇದಕ್ಕೆ ಕಾರಣ ರಿಷಬ್ ಪಂತ್ ವಿಕೆಟ್ ಕೀಪಿಂಗ್ ವ್ಯಖರಿ.

ನಾಲ್ಕನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಸ್ಟಂಪಿಂಗ್ ಚಾನ್ಸ್ ಮಿಸ್ ಮಾಡಿದ್ದು ನಾಯಕ ವಿರಾಟ್ ಕೊಹ್ಲಿಯ ಕೋಪಕ್ಕೆ ಕಾರಣವಾಗಿದೆ. ಸ್ವತಃ ಕೊಹ್ಲಿಯೇ ಸೋಲಿಗೆ ಇದೂ ಒಂದು ಕಾರಣ ಎಂದು ಪಂದ್ಯದ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲೆಕ್ಸ್ ಕ್ಯಾರಿ ಅವರ ರನೌಟ್ ಚಾನ್ಸ್ ಪಡೆದ ಪಂತ್ ಧೋನಿ ಸ್ಟೈಲ್ ನಲ್ಲಿ ಹಿಂದಕ್ಕೆ ತಿರುಗಿ ಸ್ಟಂಪ್ ನತ್ತ ಬಾಲ್ ಎಸೆಯಲು ಮುಂದಾದರು,ಆದರೆ ಸ್ಟಂಪ್ ಮಿಸ್ ಆಯಿತು ಇದರ ಲಾಭ ಪಡೆದ ಕ್ಯಾರಿ ಸಿಂಗಲ್ ರನ್ ಕದ್ದರು. ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ ಕೆಲವು ಮಿಸ್ ಫೀಲ್ಡ್ ಗಳೂ ನಮ್ಮ ಗೆಲುವಿನ ಅವಕಾಶ ಕಸಿದುಕೊಂಡವು ಎಂದರು.