ಬೆಂಗಳೂರು(ಜ:15):2018-19ರ ರಣಜಿ ಟ್ರೋಫಿ ಕ್ವಾಟರ್ ಫೈನಲ್ ನಲ್ಲಿ ಕರ್ನಾಟಕ ಮತ್ತು ರಾಜಸ್ತಾನ ಮುಖಾಮುಖಿಯಾಗಲಿವೆ.

ಮಂಗಳವಾರದಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು,ಪ್ರಚಂಡ ಲಯದಲ್ಲಿರುವ ರಾಜಸ್ತಾನ ಹಾಗೂ ಅಸ್ಥಿರ ಕರ್ನಾಟಕ ನಡುವಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಗುಂಪು ಹಂತದ 9 ಪಂದ್ಯಗಳಲ್ಲಿ 3 ಬೋನಸ್ ಅಂಕಗಳೊಂದಿಗೆ ರಾಜಸ್ತಾನ ಒಟ್ಟು 7 ಗೆಲುವು ಸಾಧಿಸಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮತ್ತೊಂದೆಡೆ ಕರ್ನಾಟಕ 3 ಗೆಲುವು,2 ಸೋಲು ಹಾಗೂ 3 ಡ್ರಾಗಳೊಂದಿಗೆ ಕೇವಲ 27 ಅಂಕಗಳನ್ನು ಗಳಿಸಿದೆ.