ಬೆಂಗಳೂರು(ಜು,03) ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮೂರು ಜನ ಅಳಿಯರಿಂದ ಹಾಳಾಗುತ್ತಿದ್ದಾರೆ ಎಂದು ಅವರ ಸಹೋದರ ಲಖನ್ ಜಾರಕಿಹೊಳಿ ಹೇಳಿದ್ದಾರೆ.ಒಂದು ವರ್ಷದಿಂದ ನಮ್ಮ ಸಂಪರ್ಕದಲ್ಲಿ ರಮೇಶ್ ಇಲ್ಲ.ಅವರ ಅಳಿಯಂದಿರ ಮಾತೇ ಕೇಳುತ್ತಾರೆ ಅವರು,ಆದ್ದರಿಂದ ರಾಜೀನಾಮೆ ಕೊಟ್ಟಿದ್ದಾರೆ.ನಾವು ಕಾಂಗ್ರೆಸ್ ನ ನಿಷ್ಠಾವಂತರು,ಸಿದ್ದರಾಮಯ್ಯ,ಹಾಗೂ ಸತೀಶ್ ಏನು ಹೇಳುತ್ತಾರೋ ಹಾಗೆ ಕೇಳುತ್ತೇವೆ ಎಂದು ನುಡಿದಿದ್ದಾರೆ.ರಮೇಶ್ ರಾಜೀನಾಮೆ ನೀಡಿ ಅಧಿಕಾರ ನೀಡಿದ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ.ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ನಾಯಕರಿಗೆ ಬಿಟ್ಟ ವಿಷಯ,ನಾವು ಗೋಕಾಕ್ ನಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದು ನುಡಿದಿದ್ದಾರೆ