ಮುಂಬೈ(ಜ.29): ಬಾಲಿವುಡ್ ದಿವಾ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ನ್ನು ಮೊದಲು ನಾನು ನೋಡಿದಾಗ ಅವರ ಮೇಲೆ ನನಗೆ ಕ್ರಶ್ ಆಗಿತ್ತು ಎಂದು ಬಾಲಿವುಡ್ ನಟ ರಾಜಕುಮಾರ್ ರಾವ್ ಹೇಳಿದ್ದಾರೆ.

ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಭೂಮಿ ಪೆಡೆನೆಕರ್ ಜೊತೆ ರಾಜ್ ಕುಮಾರ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಐಶರ್ಯ ರೈ ನ್ನು ಮೊದಲ ಬಾರಿಗೆ ಭೇಟಿ ಆದಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು ಮತ್ತು ಅವರ ಜೊತೆ ಅಭಿನಹಿಸುವಾಗ ನಾನು ತುಂಬಾ ಭಯ ಪಡುತ್ತಿದೆ. ಆ ಅನುಭವ ಸಿಹಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

2018 ರಲ್ಲಿ ರಾಜ್ ಕುಮಾರ್ ಮತ್ತು ಐಶ್ವರ್ಯಾ ರೈ ಫಾನ್ನೀ ಖಾನ್ ಸಿನಿಮಾದಲ್ಲಿ ಗಂಡ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ಐಎನ್‍ಎಸ್ ಜೊತೆಗಿನ ಸಂವಹನದಲ್ಲಿ ರಾಜುಕುಮಾರ್, ಐಶ್ವರ್ಯ ಮತ್ತು ನನ್ನ ನಡುವಿನ ಕೆಮಿಸ್ಟ್ರಿ ಜನರ ಮೆಚ್ಚುಗೆ ಪಡೆದಿದೆ ಎಂದು ಹೇಳಿದ್ದರು.