ನವದೆಹಲಿ(ಜ.24): ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ 4 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ರೈಲ್ವೆ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ರೈಲ್ವೇ ಇಲಾಖೆ 15,06,598 ನೌಕರರ ಸಾಮಥ್ರ್ಯಬಲ ಹೊಂದಿದೆ. ಇವುಗಳಲ್ಲಿ 12,23,622 ನೌಕರರು ಪ್ರಸ್ತುತ ಉದ್ಯೋಗದಲ್ಲಿದ್ದಾರೆ. ಉಳಿದ 2,82,976 ಹುದ್ದೆ ಖಾಲಿಯಾಗಿದೆ. ರೈಲ್ವೇಯಲ್ಲಿ 1,51,548 ಹುದ್ದೆಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

ರೈಲ್ವೇ ಇಲಾಖೆಯಲ್ಲಿ 2019ರಲ್ಲಿ ಸುಮಾರು 53,000 ಮಂದಿ, 2020-2021 ರಲ್ಲಿ 46,000 ಮಂದಿ ನಿವೃತ್ತರಾಗಲಿದ್ದಾರೆ. ಇದರಿಂದಾಗಿ ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ಲಭಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ರೈಲ್ವೇ ಯೋಜನೆ ನಾಲ್ಕು ಲಕ್ಷ ಜನರಿಗೆ ಉದ್ಯೋಗ ಒದಗಿಸಬಹುದು ಎಂದಿದ್ದಾರೆ.

ಹೊಸ ಪರಿಷ್ಕರಣೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ 10 ಪ್ರತಿಶತದಷ್ಟು ಮೀಸಲಾತಿ ಸೌಲಭ್ಯ ಒದಗಿಸುವ ಮೊದಲ ಸರ್ಕಾರಿ ಇಲಾಖೆಯಾಗಲಿದೆ.