ಶಿಮ್ಲಾ(ಡಿ.20): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ರಾಂತಿ ಪಡೆಯಲು ಬುಧವಾರ ಶಿಮ್ಲಾಗೆ ತೆರಳಿದ್ದಾರೆ.

ಸಹೋದರಿ ಪ್ರಿಯಾಂಕಾ ವಾದ್ರಾ ಮತ್ತವರ ಮಕ್ಕಳೊಂದಿಗೆ ರಾಹುಲ್ ಸದ್ಯ ಹಿಮಾಚಲ ಪ್ರದೇಶದ ಗಿರಿಧಾಮ ಛಾರಬ್ರಾದ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಛಾರಬ್ರಾದಲ್ಲಿ ಪ್ರಿಯಾಂಕಾ ಗಾಂಧಿ ಕಟ್ಟಿಸುತ್ತಿರುವ ಮನೆಯನ್ನು ವೀಕ್ಷಿಸಿದ ನಂತರ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಮಾತನಾಡಿದ ರಾಹುಲ್ ಪಂಚರಾಜ್ಯ ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ವೈಯಕ್ತಿಕ ಕಾರಣಕ್ಕೆ ಶಿಮ್ಲಾಗೆ ಬಂದಿದ್ದೇನೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.