ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ.

ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಜೊತೆಯಿರುವ ಫೋಟೋ ಹಾಕಿ, ನಾನು ಇಷ್ಟಪಡುವ ವ್ಯಕ್ತಿ ಅಂದರೆ ರಾಹುಲ್. ಅವರು ಅತ್ಯುತ್ತಮ ಆಟಗಾರ, ರಾಹುಲ್ ಅವರು ಲೆಜೆಂಡ್ ಆಗಿದ್ದು. ಈ ಸಾಧಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

“ಭಾರತದ ಮಹಾ ಗೋಡೆ” ಎಂದೇ ಹೆಸರುವಾಸಿಯಾಗಿರುವ ರಾಹುಲ್ ದ್ರಾವಿಡ್ ಜನವರಿ 11, 1973ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪೈಕಿ ರಾಹುಲ್ ಕೂಡಾ ಒಬ್ಬರು.

ರಾಹುಲ್ ಅವರಿಗೆ ಪದ್ಮಶ್ರೀ ಹಾಗೂ ಪದ್ಮವಿಭೂಶಣ ಪ್ರಶಸ್ತಿ ಕೂಡ ದೊರೆತಿದೆ. 164 ಟೆಸ್ಟ್ ಪಂದ್ಯದಲ್ಲಿ ರಾಹುಲ್ 13,288 ರನ್ ಸಿಡಿಸಿದ್ದಾರೆ. ಅದರಲ್ಲಿ 36 ಶತಕ ಹಾಗೂ 63 ಅರ್ಧ ಶತಕವನ್ನು ಭಾರಿಸಿದ್ದಾರೆ. 210 ಕ್ಯಾಚ್ ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ.