ತಿರುಪತಿ(ಫೆ,23): ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ನಾಯಕರು ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಹಾಗೇಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಪತಿಗೆ ಭೇಟಿ ನೀಡಿದ್ದಾರೆ.

ರಾಹುಲ್ ತಿರುಪತಿ ಬೆಟ್ಟ ಹತ್ತುವ ಮೂಲಕ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ತೆರಳುವುದಕ್ಕೂ ಮುನ್ನ ರಾಹುಲ್ ಗಾಂಧಿ ಕಚ್ಚೆ ಪಂಚೆ ಕಟ್ಟಿ ತೆರಳಿದ್ದರು. ಆದರೆ ಪಂಚೆ ಕಟ್ಟಿದ್ದ ರಾಹುಲ್ ಗಾಂಧಿಗೆ ಆರಾಮಾಗಿ ನಡೆಯುವುದಕ್ಕಾಗದೇ ಪೇಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಪಂಚೆ ಕಟ್ಟಿ ನಡೆಯುತ್ತಿರುವ ವಿಡಿಯೋವನ್ನು ಕೆಲವರು ಟ್ರೋಲ್ ಮಾಡಿದ್ದು, ಪಂಚೆ ಕಟ್ಟು ನಡೆಯಲು ಸಾಧ್ಯವಾಗದೇ ಇರುವವರು ದೇಶವನ್ನು ಕಟ್ಟಿ ನಡೆಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಹುಲು ಭರ್ಜರಿ ತಯಾರಿಯಲ್ಲಿದ್ದು, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆಯೇ? ಎಂಬುದನ್ನು ಕಾದು ನೋಡಬೇಕು.