ನವದೆಹಲಿ(ಜ,26): ಪ್ರಿಯಾಂಕ ಒಳ್ಳೆಯ ಮಹಿಳೆಯಾಗಿದ್ದಾರೆ ಆದರೆ ರಾಹಲ್ ಅವರಿಗೆ ರಾಜಕೀಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ಅವರು ಸಹೋದರಿ ಪ್ರಿಯಾಂಕ ಸಹಾಯವನ್ನು ಪಡೆದಿದ್ದಾರೆ ಎಂದು ಲೋಕಸಭಾ ಸ್ಪೀಕರ ಸುಮಿತ್ರಾ ಮಾಹಜನ್ ಹೇಳಿದ್ದಾರೆ.

ನಾನು ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿಚಾರದ ಬಗ್ಗೆ ತಲೆ ಹಾಕುವುದಿಲ್ಲ, ಆದರೆ ನಾಯಕತ್ವ, ಸಾಮಥ್ರ್ಯ ಹೊಂದಿರುವ ವ್ಯಕ್ತಿಗೆ ಮುಂದೆ ಬರಲು ಅವಕಾಶ ನೀಡಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.

ಮುಂಬರುವ ರಾಷ್ಟ್ರೀಯ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏನನ್ನು ಪಕ್ಷದ ಹತ್ತಿರ ಕೇಳಲಿಲ್ಲ, ನಾನು ಸ್ಫೀಕರ್ ಆಗಬೇಕು ಎಂದು ಅವರು ನಿರ್ಧರಿಸಿದರು, ಹಾಗಾಗಿ ನಾನು ಸ್ಪೀಕರ್ ಆಗಿದ್ದೇನೆ. ನಾನು ಯಾವ ಜವಾಬ್ದಾರಿ ಪಡೆಯುತ್ತೇನೊ ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಪ್ರಿಯಾಂಕ ರಾಜಕೀಯದ ಕುರಿತು ಸಮಿತ್ರಾ ಅವರ ಹೇಳಿಕೆ ಭಾರೀ ಟೀಕೆಗೆ ಒಳಗಾಗಿದೆ