ಬೆಂಗಳೂರು(ಜೂ:14): ಇಂದು ಮೈತ್ರಿ ಸರ್ಕಾರದಿಂದ ಎರಡನೇಯ ಬಾರಿ ಸಂಪುಟ ವಿಸ್ತರಣೆ ಕಾರ್ಯ ರಾಜಭವನದಲ್ಲಿ ಸರಳ ಸಮಾರಂಭದ ಮೂಲಕ ನಡೆಯಿತು. ಈ ಸಮಾರಂಭದಲ್ಲಿ ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಹೆಚ್ ನಾಗೇಶ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಂದು ಜೆಡಿಎಸ್ ಪಕ್ಷದಿಂದ ಬಾಕಿ ಉಳಿದಿದ್ದ ಮೂರು ಸಚಿವ ಸ್ಥಾನಗಳಲ್ಲಿ ಎರಡು ಸಚಿವ ಸ್ಥಾನಕ್ಕೆ ಸಂಪುಟ ವಿಸ್ತರಣೆ ಕಾರ್ಯ ನಡೆಯಿತು. ಮೈತ್ರಿ ಪಕ್ಷದಿಂದ ನಡೆಯುತ್ತಿರುವ ಎರಡನೆ ಬಾರಿಯ ಸಚಿವ ಸಂಪುಟ ವಿಸ್ತರಣ ಇದಾಗಿದ್ದು, ಜೆಡಿಎಸ್ ಪಕ್ಷ ಇಬ್ಬರು ಪಕ್ಷೇತರ ಶಾಸಕರನ್ನು ತನ್ನ ಪಕ್ಷಕ್ಕೆ ಸೆಳೆದು ಸಚಿವ ಸ್ಥಾನ ಹಂಚಿಕೆ ಮಾಡಿದೆ.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷೇತರ ಶಾಸಕ ಆರ್ ಶಂಕರ್ ಮತ್ತು ಶಾಸಕ ಹೆಚ್ ನಾಗೇಶ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇವರಿಗೆ ರಾಜ್ಯಪಾಲ ವಜುಬಾಯಿ ವಾಲ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಈ ಮೂಲಕ ಸಂಪುಟ ದರ್ಜೆಯ ಸಚಿವರಾಗಿ, ಪಕ್ಷೇತರ ಶಾಸಕರು ಮೈತ್ರಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.