ಬೆಂಗಳೂರು(ಜ:05): ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿರುವ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ಕಾರ್ಯಕ್ರಮಕ್ಕೆ ಅಭಿಮಾನಿಗಳು ಪಾಲ್ಗೊಳ್ಳುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಮೂಲಕ ಆಮಂತ್ರಣ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ನಮ್ಮ’ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಹುಬ್ಬಳ್ಳಿಯಲ್ಲಿ ನಡೆಯಲಿದೆ,ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ ಎಂದು ಕೋರಿದ್ದಾರೆ.

ಐ.ಟಿ ದಾಳಿಯ ಪರಿಶೀಲನೆ ಶುಕ್ರವಾರ ರಾತ್ರಿಯೇ ಮುಗಿದಿದ್ದು ಕುಟುಂಬ ಸದಸ್ಯರು ಹಾಗೂ ಚಿತ್ರತಂಡದ ಸಮೇತ ಪುನೀತ್ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ