ನವದೆಹಲಿ: ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಯೋಗಾ ಗುರು ಬಾಬಾ ರಾಮ್ ದೇವ್ ಪಾಕ್ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿಗೆ ಅಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಈ ವಿಚಾರವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪ್ರತಿಯೊಬ್ಬರೂ ಕೂಡ ಪ್ರಧಾನಿ ಬೆಂಬಲಕ್ಕಿದ್ದಾರೆ. ಇದರಲ್ಲಿ ಕೀಳು ಮಟ್ಟದ ರಾಜಕೀಯ ಬೇಡ. ಇದು ಭಾರತದ ಐಕ್ಯತೆ, ಸಾರ್ವಭೌಮತ್ವ, ಮತ್ತು ಸ್ವಾಭಿಮಾನದ ವಿಷಯ” ಎಂದು ಹೇಳಿದ್ದಾರೆ.

ಭಾರತವು ಯಾವೋಬ್ಬ ಭಯೋತ್ಪಾದಕನನ್ನು ಕೂಡ ಬಿಡಬಾರದು ಅದರಲ್ಲೂ ಹಫೀಜ್ ಸಯಿದ್ ಮತ್ತು ಅಜರ್ ಮಸೂದ್ ರನ್ನು ಮೊದಲು ಬಿಡಬಾರದು. ಅವರನ್ನು ಜೀವಂತವಾಗಲಿ ಅಥವಾ ಹೆಣವಾಗಿಯಾದರೂ ಆಗಲಿ ಅವರನ್ನು ಹಿಡಿದು ಭಾರತಕ್ಕೆ ತರಬೇಕು. ಉಗ್ರರ ಈ ಕೃತ್ಯಗಳಿಂದ ದೇಶದ ಐಕ್ಯತೆಯನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.