ನವದೆಹಲಿ(ಫೆ,22): ಬೇರೆ ಬೇರೆ ಉದ್ದೇಶಗಳಿಗಾಗಿ ನೀಡುವ ಆರ್ಥಿಕ ಸಹಾಯವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿರುವ ಅಂತರ ಸರ್ಕಾರಿ ಸಂಸ್ಥೆಯಾದ ಫೈನಾಷಿಯಲ್ ಟಾಸ್ಕ್ ಫೋರ್ಸ್ ತನ್ನ ಗ್ರೆ ಪಟ್ಟಿಯಲ್ಲಿ ಪಾಕಿಸ್ತಾನವು ಮುಂದುವರೆಯಲಿದೆ ಎಂದಿದೆ.

ಕಳೆದ ವಾರ ಪುಲ್ವಾಮದ ಉಗ್ರರ ದಾಳಿಯಲ್ಲಿ 40 ಸಿಆರ್‍ಪಿಎಫ್ ಸೈನಿಕರು ಹುತಾತ್ಮರಾಗಿದ್ದರು ಈ ಬೆನ್ನಲ್ಲೇ ಗ್ರೆ ಪಟ್ಟಿಯಿಂದ ಪಾಕಿಸ್ತಾನವನ್ನು ಹೊರಗಿಡಲು ಭಾರತ ಯತ್ನಿಸಿತ್ತು ಒಂದು ವೇಳೆ ಪಾಕ್ ಅನ್ನು ಈ ಪಟ್ಟಿಯಿಂದ ಹೊರ ಇಟ್ಟರೆ ಪಾಕ್ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯುವುದು ಕಷ್ಟಕರವಾಗಲಿದೆ.

38 ದೇಶಗಳನ್ನು ಸದಸ್ಯರಾಗಿ ಹೊಂದಿರುವ ಎಫ್.ಎ.ಟಿ.ಎಫ್ ನ ಸಭೆಯು ಪ್ಯಾರಿಸ್ ನಲ್ಲಿ ನಡೆಯುತ್ತಿದೆ. ಪಾಕಿಸ್ತಾನವು ಅದರ ಕಾರ್ಯ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮೇ 2019 ರ ವರೆಗೆ ಸಮಯವನ್ನು ನೀಡಲಾಗಿದೆ ಎಂದು ಎಫ್.ಎ.ಟಿಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಯೋತ್ಪಾದನೆ ಹಣಕಾಸು ಕುರಿತಂತೆ ಭೀತಿಗೊಳಿಸುವ ಪಾಕಿಸ್ತಾನದ ಬದ್ಧತೆಗಳು ಈ ವರ್ಷ ಜೂನ್ ಮತ್ತು ಅಕ್ಟೋಬರ್ ನಲ್ಲಿ ಪರಿಶೀಲಿಸಲಾಗುವುದು ಒಂದು ವೇಳೆ ಪ್ರಧಾನಿ ಇಮ್ರಾನ್ ಖಾನ್ ಅವರ ದೇಶವು ಗುರಿಗಳನ್ನು ಪೂರೈಸದಿದ್ದರೆ ಅದನ್ನು ಕಪ್ಪುಪಟ್ಟಿಗೆ ಸೇರಿಸಬಹುದಾಗಿದೆ ಎಂದು ಎಫ್.ಎ.ಟಿಎಫ್ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷ ಜೂನ್ ನಲ್ಲಿ ಪಾಕಿಸ್ತಾನವನ್ನು ಗ್ರೆ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಸಭೆಯಲ್ಲಿ ಈ ಪಟ್ಟಿಯಿಂದ ತೆಗೆದುಹಾಕಲು ಚಿಂತನೆ ನಡೆಸಲಾಗಿದೆ

ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸುವ ಮೂಲಕ 40 ಸಿಆರ್‍ಪಿಎಫ್ ಪೊಲೀಸರ ಸಾವಿಗೆ ಕಾರಣವಾಗಿರುವ ಪಾಕ್ ನ ವಿರುದ್ದ ಭಾರತ ಉಲ್ಲಂಘಿಸುವ ಒಂದು ಕಡತವನ್ನು ಎಫ್.ಎ.ಟಿಎಫ್ ಗೆ ನೀಡಲಾಗುವುದು ಎಂದು ಪುಲ್ವಾಮ ದಾಳಿಯ ಎರಡು ದಿನಗಳ ನಂತರ ಹಿರಿಯ ಗುಪ್ತಚರ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಕಡತದ ಮೂಲಕ, ಭಾರತವು ಪಾಕ್ ಭಯೋತ್ಪಾದನೆ ಜೊತೆಗಿನ ಸಂಪರ್ಕವನ್ನು ಬಹಿರಂಗಪಡಿಸಲು ಮತ್ತು ಪಾಕಿಸ್ತಾನದ ಮೇಲೆ ಒತ್ತಡವನ್ನು ಹೆಚ್ಚಿಸಲು ಬಯಸಿದೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಏಜೆನ್ಸಿಗಳು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಹೇಗೆ ಹಣವನ್ನು ಒದಗಿಸುತ್ತಿದ್ದಾರೆ ಎಂಬುದನ್ನು ಕಡತದ ಮೂಲಕ ಎಫ್.ಎ.ಟಿಎಫ್ ಗೂ ಸಹ ತಿಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಎಫ್.ಎ.ಟಿ.ಎಫ್ ನ ಕಪ್ಪುಪಟ್ಟಿ ಎಂದರೆ, ಹಣದ ಲಾಂಡರಿಂಗ್ ಮತ್ತು ಭಯೋತ್ಪದಕ ಹಣಕಾಸಿನ ವಿರುದ್ಧದ ಜಾಗತಿಕ ಹೋರಾಟದಲ್ಲಿ ಸಂಬಂಧಪಟ್ಟ ದೇಶವು ಅಸಹಕಾರ ಎಂದು ಅರ್ಥ. ಒಂದು ವೇಳೆ ಪಾಕಿಸ್ತಾನ ಈ ಕಪ್ಪು ಪಟ್ಟಿಗೆ ಸೇರಿದರೆ ಇಟರ್ ನ್ಯಾಷನಲ್ ಮನಿಟರಿ ಪಂಡ್, ವರ್ಡ್ ಬ್ಯಾಂಕ್, ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಮತ್ತು ಯೂರೋಪಿಯನ್ ಯುನಿಯನ್ ಮುಂತಾದ ಬ್ಯಾಂಕ್‍ಗಳಿಂದ ಪಾಕ್ ಅನ್ನು ಕೆಳಗಿಳಿಸುವ ಸಾಧ್ಯತೆಗಳು ಇರುತ್ತವೆ.