ಬೆಂಗಳೂರು:(ಜೂನ್:27): ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರಿಂದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.

ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹಠಾವೋ ಆಂದೋಲನವನ್ನು ಮಾಡಲಾಗುತ್ತಿದೆ. ಪ್ರತಿಭಟನೆ ಮಾಡಲು ಎಐಟಿಯುಸಿ ನೌಕರರ ಸಂಘಟನೆಯಿಂದ ಕರೆ ನೀಡಲಾಗಿದೆ.

ರಾಜ್ಯದಲ್ಲಿ ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣ ಅಧಿಕಾರ ಸ್ವೀಕರಿಸಿದ ವೇಳೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದನೆ ನೀಡಲಿಲ್ಲ, ಮತ್ತು ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ಅನುದಾನ ನೀಡುವಲ್ಲಿ ಸಾರಿಗೆ ಸಚಿವರು ವಿಫಲರಾಗಿದ್ದಾರೆ. ಇದರಿಂದ ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣ ಅವರ ಸಚಿವ ಸ್ಥಾನ ತೆರವುಗೊಳಿಸಿ ಬೇಕೆಂದು ಪ್ರತಿಭಟನಾಕಾರರು ಒತ್ತಾಸೆಯಾಗಿದೆ.

ಪ್ರತಿಭಟನಾಕಾರರು ಲಾಲ್‍ಬಾಗ್ ರೋಡ್ ನಿಂದ ಕೆಎಸ್‍ಆರ್‍ಟಿಸಿಯ ಮುಖ್ಯ ಕಚೇರಿಗೆ ತಲುಪಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಹೇಳಲಾಗುತ್ತದೆ.