ಹೊಸಪೇಟೆ:(ಜೂನ್06): ಮೀಸಲಾತಿ ಪ್ರಮಾಣವನ್ನು ಹೆಚ್ಚಿಸ ಬೇಕೆಂದು ವಾಲ್ಮೀಕಿ ನಾಯಕ ಸಮುದಾಯದವರು ನಗರದಲ್ಲಿಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಹೆಚ್. ವಿಶ್ವನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಶೇ 6.95ರಷ್ಟು ಜನರು ಈ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯಕ್ಕೆ ಶಿಕ್ಷಣದಲ್ಲಿ ಶೇ 3 ರಷ್ಟು ಮಾತ್ರ ಮೀಸಲಾತಿ ನಿಗದಿ ಮಾಡಲಾಗಿದ್ದು, ಈ ಮೀಸಲಾತಿ ಪ್ರಮಾಣವನ್ನು 7 ಕ್ಕೆ ಹೆಚ್ಚಿಸ ಬೇಕೆಂದು ಆಗ್ರಹಿಸಲಾಗಿದೆ.

ಇನ್ನೂ ಸುಳ್ಳು ಜಾತಿ ಪ್ರಮಾಣ ಪತ್ರ ಹೊಂದಿದವರನ್ನು ಪರಿಗಣಿಸಿ ಅವರಿಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಹಾಗೂ ಅನರ್ಹರಿಗೆ ಪ್ರಮಾಣ ಪತ್ರ ಸಿಗದಂತೆ ನೋಡಿಕೊಳ್ಳ ಬೇಕು ಎನ್ನಲಾಗಿದೆ.

ಇನ್ನೂ ಈ ಪ್ರತಿಭಟನೆಯಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಶಿವರಾಮ ಗುಜ್ಜಲ, ಖಜಾಂಚಿ ಬೆಳಗೋಡು ಯಮನೂರಪ್ಪ, ಕಾರ್ಯದರ್ಶಿ ಬಿ. ತಾಯಪ್ಪ ನಾಯಕ, ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ ಸೇರಿದಂತೆ ಇನ್ನೂ ಈ ಸಮುದಾಯದ ಇತರರು ಹಾಜರಿದ್ದರು.