ಚಿತ್ರದುರ್ಗ:(ಜೂನ್.10): ಚಿತ್ರದುರ್ಗದಲ್ಲಿ ಇಂದು ರೈತರು ಆರ್.ಹಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ 2014ರ ಭೂ ಸ್ವಾದೀನ ಕಾಯ್ದೆ ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಇನ್ನೂ ಈ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ ನೇತೃತ್ವದಲ್ಲಿ ನಡೆದಿದ್ದು, ಈ ಪ್ರತಿಭಟನೆಯ ವೇಳೆ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕøತರಾದ ಗಿರೀಶ್ ಕಾರ್ನಾಡ್ ನಿಧನದ ಸುದ್ದಿ ಕೇಳಿದ ರೈತರು ಮೌನಾಚರಣೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನೂ ಈ ವೇಳೆ ಹೊಳಲ್ಕರೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹಾಗೂ ಹೊಸದುರ್ಗದ ಹಾಗಲಕೆರೆ ಚೆಕ್ ಪೋಸ್ಟ್‍ನಲ್ಲಿ ಪ್ರತಿಭಟನೆಯನ್ನು ನಡೆಸಿದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.