ನವದೆಹಲಿ(ಜ,25): ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಕುರಿತು ವಿರೋಧ ಪಕ್ಷಗಳ ನಾಯಕರಿಂದ ಭಾರೀ ಪ್ರಮಾಣದ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಿಯಾಂಕ ನೋಡಲು ತುಂಬಾ ಸುಂದರವಾಗಿದ್ದಾರೆ ಆದರೆ ನಾನು ನೋಡಬಹುದಾದ ಯಾವುದೇ ಪ್ರತಿಭೆಯನ್ನು ಹೊಂದಿಲ್ಲ ಎಂದು ಬಿಹಾರ ಬಿಜೆಪಿ ಸಚಿವ ವಿನೋದ್ ನಾರಯಣ್ ಝಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಿಯಾಂಕ ಸುಂದರವಾದ ಮುಖವನ್ನು ಮಾತ್ರ ಹೊಂದಿದ್ದಾರೆಯೇ ಹೊರತು ಅವರು ಯಾವುದೇ ರಾಜಕೀಯ ಸಾಧನೆಯನ್ನು ಮಾಡಿಲ್ಲ ಎಂದಿದ್ದಾರೆ.

ಇನ್ನು ಪ್ರಿಯಾಂಕ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ಮುಖಂಡ ಸುಶೀಲ್ ಮೋದಿ ಮಹಿಳೆಯೊಬ್ಬರನ್ನು ತಮ್ಮ ದೋಷಪೂರಿತ ರಾಜಕೀಯದಲ್ಲಿ ಪಾಲುದಾರರಾಗಿ ಮಾಡಿಕೊಂಡಿರುವದಕ್ಕೆ ಕಾಂಗ್ರೆಸ್ ತುಂಬಾ ಸಂತೋಷದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಿಯಾಂಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಹೋಲುತ್ತಾರೆ ಎಂಬುದರ ಬಗ್ಗೆ ಸುಶೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.