ಮುಂಬೈ:(ಫೆ09): ಪ್ರಿಯಾಂಕಾ ಚೋಪ್ರಾ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದ್ದು,. ಈ ಪ್ರತಿಮೆ ನ್ಯೂಯಾರ್ಕ್‍ನಲ್ಲಿ ಸ್ಥಾಪನೆಗೊಂಡಿದೆ. ಇದರ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ತಮ್ಮ ಇಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಕೆಂಪು ಬಣ್ಣದ ಗೌನ್ ಧರಿಸಿ ಮೇಣದ ಪ್ರತಿಮೆಯಲ್ಲಿ ಮಿಂಚುತ್ತಿದ್ದಾರೆ. ಇದು ಮೇಡಂ ಟುಸ್ಸಾಡ್‍ನಲ್ಲಿ ಅನಾವರಣಗೊಂಡ ಮೊದಲ ಪ್ರತಿಮೆಯಾಗಿದೆ. ಈಗಾಗಲೇ ಅಲ್ಲಿ ಅನೇಕ ಬಾಲಿವುಡ್ ನಟ ನಟಿಯರ ಮೇಣದ ಪ್ರತಿಮೆಗಳು ಬಂದಿವೆ.

ಕೆಲವು ದಿನಗಳ ಹಿಂದೆ ಪ್ರಿಯಾಂಕ ಅವರ ಉಪಸ್ಥಿತಿಯಲ್ಲಿಯೆ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇನ್ನು ಏಷ್ಯಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿಯೂ ಮೇಣದ ಪ್ರತಿಮೆ ಮೂಡಿ ಬರಲಿದೆ ಎನ್ನಲಾಗಿದೆ.