ನವದೆಹಲಿ:(ಫೆ26): ಭಾರತೀಯ ಸೈನಿಕರು ಪಾಕ್‍ಗೆ ನುಗ್ಗಿ ಉಗ್ರರನ್ನು ಮಟ್ಟ ಹಾಕಿದ್ದಾರೆ. ಭಾರತೀಯ ಸೇನೆಯ ದಾಳಿಯ ನಂತರ ಪ್ರಧಾನಿ ಮೋದಿ ಖಡಕ್ ಭಾಷಣ ಮಾಡಿ ” ಭಾರತವನ್ನು ಅಲುಗಾಡಲು ಬಿಡುವುದಿಲ್ಲ, ಮಣ್ಣಿನ ಆಣೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ಹೇಳಿದ್ದಾರೆ.

ಏರ್ ಸರ್ಜಿಕಲ್ ಸ್ಟೈಕ್ ಬಳಿಕ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ ಅವರು ಭಾರತವನ್ನು ಅಲುಗಾಡಲು ಬಿಡುವುದಿಲ್ಲ, ಈ ಮಣ್ಣಿನ ಆಣೆ ಎಂಬ ಭರವಸೆಯನ್ನು ನೀಡಿದ್ದಾರೆ. ಭಾರತ್ ಮಾತಾ ಕಿ ಜೈ ಎನ್ನುವುದರ ಮೂಲಕ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ ಎಂದು ಹೇಳುವುದರ ಜೊತೆಗೆ ನಾನು ಎಂದಿಗೂ ಭಾರತಾಂಬೆಯನ್ನು ತಲೆತಗ್ಗಿಸಲು ಬಿಡುವುದಿಲ್ಲ, ದೇಶಕ್ಕಿಂತ ಹೆಚ್ಚು ಬೇರೇನ್ನಿಲ್ಲ, ಜೈಜವಾನ್, ಜೈಕಿಸಾನ್, ಜೈ ವಿಜ್ಞಾನ್ ಎಂಬುದನ್ನು ನೆನಪಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆಎಂದಿದ್ದಾರೆ.

ದೇಶ ಸೇವೆ ಮಾಡುವುದೇ ಮುಖ್ಯ ಕೆಲಸ, ದೇಶವನ್ನು ಶರಣಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಡಕ್ ಭಾಷಣವನ್ನು ಮಾಡಿದ್ದಾರೆ.