ನವದೆಹಲಿ(ಜ:31): ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ” ನಮಾಮಿ ಗಂಗೆ” ಗೆ ಹಣಕಾಸು ಒದಗಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರಿಗೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶ -ವಿದೇಶಗಳಲ್ಲಿ ಉಡುಗೊರೆಯಾಗಿ ಬಂದಿದ್ದ ಸುಮಾರು 1800 ವಸ್ತುಗಳನ್ನು ಹರಾಜು ಹಾಕಲಾಯಿತು.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಈ ಉಡುಗೊರೆಗಳನ್ನು ಭಾನುವಾರ ಮತ್ತು ಸೋಮವಾರ ಹರಾಜು ಹಾಕಲಾಗಿದ್ದು, ಉಳಿದ ಉಡುಗೊರೆಗಳನ್ನು ಇಂದಿನಿಂದ ಆರಂಭಿಸಿ ಜನವರಿ 31 ರ ವರೆಗೆ ಆನ್ ಲೈನ್ ನಲ್ಲಿಯೇ ಇ-ಹರಾಜಿಗೆ ಒಳಪಡಿಸಲಾಗಿದೆ.

ರಾಷ್ಟ್ರೀ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಮೋದಿಗೆ ಉಡುಗೊರೆಯಾಗಿ ಬಂದಿದ್ದ ಭಿತ್ತಿಪತ್ರಗಳು, ಛಾಯಾಚಿತ್ರಗಳು, ಶಾಲು, ಬೆಳ್ಳಿ ವಸ್ತುಗಳು, ಕಟ್ಟಿಗೆಯಿಂದ ತಯಾರಿಸಲಾದ ವಸ್ತುಗಳು ಹರಾಜಿನಲ್ಲಿದ್ದವು.

ಒಂದು ಸಾವಿರ ರೂ. ದಿಂದ 22, 000 ರೂ .ಗಳಿಗೂ ಅಧಿಕ ಹಣಕ್ಕೆ ಉಡುಗೊರೆಗಳು ಹರಾಜಾಗಿವೆ . ಈ ಹರಾಜು ಹಣಕ್ಕಾಗಿ ಅಲ್ಲ, ಆದರೆ, ಪ್ರತಿಷ್ಠಿತ ” ನಮಾಮಿ ಗಂಗೆ ” ಯೋಜನೆಗಾಗಿ ನಿಧಿ ಸಂಗ್ರಹಕ್ಕಾಗಿ, ನರೇಂದ್ರ ಮೋದಿಯವರಿಗೆ ಬಂದಿರುವ ಉಡುಗೊರೆಗಳನ್ನು ಹರಾಜಿಗೆ ಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹರಾಜಿನಲ್ಲಿ ಪಾಲ್ಗೊಂಡಿದ್ದ ಅಮಿತಕುಮಾರ್ ಹೇಳಿದರು.