ಬೆಂಗಳೂರು(ಫೆ.11): ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಫೋಟೋವನ್ನು ಶರ್ಟ್‍ನಲ್ಲಿ ಹಾಕಿಸಿಕೊಳ್ಳುತ್ತಾರೆ. ಆದರೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವಿರುವ ಸೀರೆ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಫೋಟೋ ಪ್ರಿಂಟ್ ಇರುವ ಸೀರೆ ಈಗ ಮಾರುಕಟ್ಟೆಯಲ್ಲಿ, ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸೀರೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೋದಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ದರಿಂದ ಅವರ ಭಾವಚಿತ್ರವುಳ್ಳ ಸೀರೆಗಳು ಮಾರುಕಟ್ಟೆಗೆ ಪರಿಚಹಿಸುವುದರ ಮೂಲಕ ಹೆಚ್ಚಿನ ಜನರನ್ನು ತಮ್ಮತ್ತ ಸೆಳೆಯುವ ಪ್ಲಾನ್ ವ್ಯಾಪಾರಿಗಳದಾಗಿದೆ.

ಸೀರೆಯಲ್ಲಿ ಮೋದಿಯ ಫೋಟೋ, ಅವರು ಚಲಾವಣೆಗೆ ತಂದಿರುವ 500 ರೂ. ಮತ್ತು 2000 ರೂ. ನೋಟುಗಳ ಫೋಟೋ ಕೊನೆಯಲ್ಲಿ ಮತ್ತೆ ಮೋದಿ ಭಾವಚಿತ್ರ, ಹೂವುಗಳ ಫೋಟೋ ಪ್ರಿಂಟ್ ಆಗಿದೆ.

ಇನ್ನೂ ಬೇರೆ ಡಿಸೈನ್ ಸೀರೆಗಳನ್ನು ನೋಡಿದರೆ, ಮೋದಿ ಫೋಟೋ ಒಂದನ್ನೇ ಸೀರೆಯುದ್ದಕ್ಕೂ ಹೂಗಳ ಜೊತೆ ಪ್ರಿಂಟ್ ಮಾಡಲಾಗಿದ್ದು ನದಿ, ಕಾಡು, ಗಿಡ, ಮರ ಹಾಗೂ ಸ್ವಚ್ಛಭಾರತ ಸಂಕೇತದ ಮೋದಿ ಕನ್ನಡಕವನ್ನು ಕೂಡ ಸೀರೆಯಲ್ಲಿ ಪ್ರಿಂಟ್ ಮಾಡಲಾಗಿದೆ.

ಒಟ್ಟಿನಲ್ಲಿ ಸೀರೆ ಭಾರೀ ಡಿಮ್ಯಾಂಡ್ ವ್ಯಕ್ತವಾಗಿದ್ದು, ಬಿಜೆಪಿಯವರೆಲ್ಲ ಈ ಸೀರೆಗಳ ಖರೀದಿಗೆ ಮುಗಿ ಬೀಳಬಹುದು ಎಂಬ ಲೆಕ್ಕಚಾರವೂ ಜೋರಾಗಿದೆ