ಬೆಂಗಳೂರು(ಡಿ.24) ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಮತ್ತು ಯುಗದ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.21ರಂದು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದೆ.

ಈ ಬಾರಿಯ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ’ಯನ್ನಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ. ಯುಗದ ಸಾಧಕ ಪ್ರಶಸ್ತಿಗೆ ಪ್ರೊ. ಜಿ. ವೆಂಕಟಸುಬ್ಬಯ್ಯರವರು ಆಯ್ಕೆಯಾಗಿದ್ದು, ಇದರ ಜೊತೆಗೆ 2019ನೇ ಸಾಲಿನ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಿಗೆ ನೀಡುವುದಾಗಿ ಕಾರ್ಯಕಾರಿ ಸಮಿತಿ ತಿಳಿಸಿದೆ.

 

ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು.
ಶ್ರೀ ಎಂ ಸಿದ್ದರಾಜು                            ಶ್ರೀ ಸುನೀಲ್ ಪ್ರಸಾದ್ ಕೆ
ಶ್ರೀ ಮತಿ ಕೆ.ಹೆಚ್ ಸಾವಿತ್ರಿ                    ಶ್ರೀ ಬಿ ವಿ ನಾಗರಾಜು
ಶ್ರೀ ರವೀಂದ್ರ ಜಿ ಭಟ್                         ಶ್ರೀ ಕೆ.ಏನ್ ಚೆನ್ನೇಗೌಡ
ಶ್ರೀ ಹರಿಶ್ಚಂದ್ರ ಭಟ್ ಬಿ.                       ಶ್ರೀ ಅಬ್ದುಲ್ ಅಮೀದ್ ಎಂ(ಪಾಳ್ಯ)
ಶ್ರೀ ಇಮ್ರಾನ್ ಖುರೇಶಿ                        ಶ್ರೀ ಜಿ.ಕೆ ಸತ್ಯ ಲಕ್ಷ್ಮಣ್ ಕೊಡಸೆ
ಶ್ರೀ ಜೋಸೆಫ್ ಹೂವರ್                       ಶ್ರೀ ಎನ್ ಎಸ್ ಶಂಕರ್
ಶ್ರೀ ಬಿ.ಕೆ.ರವಿ                                 ಶ್ರೀ ರು. ಬಸಪ್ಪ
ಶ್ರೀ ಜಯಪ್ರಕಾಶ್ ಶೆಟ್ಟಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ಸಿ.ಎನ್ ಅಶ್ವಥ್ ನಾರಾಯಣ ಮತ್ತು ಲಕ್ಷ್ಮಣ ಸವದಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.