ಬೆಂಗಳೂರು:(ಜ22): ಇನ್ನೇನು ಕೆಲವೇ ಗಂಟೆಗಳಲ್ಲಿ ದೇವರು ಮರೆಯಾಗುತ್ತಿದ್ದಾರೆ. ಭಕ್ತಾದಿಗಳು ಕಣ್ಣೀರಿಡುತ್ತಿದ್ದಾರೆ. ಅವರ ಪಾರ್ಥಿವ ಶರೀರವನ್ನು ವೇದಿಕೆಯಿಂದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ.

ಹಳೆಯ ಮಠದ ಕ್ರಿಯಾ ಸಮಾಧಿಯ ಸ್ಥಳದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ರುದ್ರಾಕ್ಷಿಯ ರಥದಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತದೆ.

ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನವನ್ನು ಪಡೆದಿದ್ದು ˌ ಇನ್ನು ದರ್ಶನ ಪಡೆಯಲು ನೂಕು ನುಗ್ಗಲು ಆದ ಕಾರಣ ಸಮಯ ಹೆಚ್ಚಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ಕಣ್ಣಿಗೆ ಕಾಣುವ ದೇವರು ಮರೆಯಾಗುತ್ತಿದ್ದಾರೆ.