ಕಲಬುರಗಿ(ಜುಲೈ.04) ಅಫ್ಜಲ್​ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಟ ಹಿಂದು ಮಹಾಸಮಾವೇಶದಲ್ಲಿ ಬಿಜೆಪಿ ಸಂಸದರ ವಿರುದ್ಧದ ರಾಷ್ಟ್ರೀಯ ಹಿಂದು ಸೇನಾದ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುತಾಲಿಕ್‌ ಬಿಜೆಪಿ‌ ಸಂಸದರ ವಿರುದ್ಧ ಹರಿಹಾಯ್ದಿದ್ದು, ಆರು ಬಾರಿ ಗೆಲ್ಲುತ್ತೀರಿ, 25 ವರ್ಷ ಒಂದೇ ಜಿಲ್ಲೆಯನ್ನು ಆಳ್ವಿಕೆ ಮಾಡ್ತೀರಿ. ನಾಚಿಕೆ ಇಲ್ಲವಾ ನಿಮಗೆ. ನೀವೇನು ಮಾಡಿದ್ದೀರಿ. ಮೋದಿಯವರ ಮುಖ ನೋಡಿ ನಾವೆಲ್ಲ ನಿಮಗೆ ಮತ ನೀಡಿ ಗೆಲ್ಲಿಸಿದ್ದೀವಿ, ಹಿಂದುತ್ವದ ವಿಚಾರ ನೋಡಿ ಮಾತ್ರ ಅವರಿಗೆ ನಾವು ವೋಟು ಹಾಕಿದ್ದೀವಿ. 5 ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಬಾರಿ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೀವಿ. ಏನು ಕತ್ತೆ ಕಾಯುತ್ತೀರಾ ಎಂದು ಹಿಗ್ಗಾಮುಗ್ಗ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಮೋದ್ ಮುತಾಲಿಕ್ ನಾಲಿಗೆ ಹರಿಬಿಟ್ಟಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.