ಬೆಂಗಳೂರು(ಜೂನ್.20) ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸುಳ್ಳು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಾಗ ಅಫಿಡೆವಿಡ್ ಹಾಕಬೇಕಿತ್ತು ಆದರೆ ಜೆಡಿಎಸ್ ಅಭ್ಯರ್ಥಿ ಎಲ್ಲವನ್ನೂ ಬದಿಗೆ ತಳ್ಳಿದ್ದಾರೆ.

ಬ್ಯಾಂಕ್ ಗಳ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ. ಬ್ಯಾಂಕ್ ಬ್ಯಾಲೆನ್ಸ್ 578 ಸಾವಿರ ಎಂದು ತೋರಿಸಿದ್ದಾರೆ. ಆದರೆ ಬ್ಯಾಂಕ್ ನಲ್ಲಿ 4,33,1286 ರೂ. ಲಕ್ಷ ಹಣ ಇದೆ. ಸುಳ್ಳು ದಾಖಲೆಯನ್ನು ಪ್ರಜ್ವಲ್ ನೀಡಿದ್ದಾರೆ ನೆಲಮಂಗಲದ ಬಳಿ 12 ಎಕರೆ ಭೂಮಿ ಖರೀದಿಸಿದ್ದಾರೆ.

ಬಾವಿಕೆರೆ ಎಂಬಲ್ಲಿ 12 ಎಕರೆ ಖರೀದಿಸಿದ್ದಾರೆ. ಆದರೆ ಮಾರ್ಕೆಟ್ ಬೆಲೆಯನ್ನು ನಮೂದಿಸಿಲ್ಲ. ಅಲ್ಲಿ ಎರಡೂವರೆ ಕೋಟಿ ಎಕರೆಗೂ ಬೆಲೆಯಿದೆ. ಬೇನಾಮಿ ಹೆಸರಲ್ಲಿ 45 ಎಕರೆಗೆ ಬೇಲಿಯನ್ನು ಹಾಕಿದ್ದಾರೆ.

ಮಾಜಿ ಪ್ರಧಾನಿ ಮೊಮ್ಮಗ ಎಂಬ ಕಾರಣಕ್ಕೆ ಬಿಟ್ಟಿದ್ದಾರಾ? ದಾಖಲೆ ಸಮೇತ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ. ಇಲ್ಲಿಯವರೆಗೂ ಐಟಿ ಇಲಾಖೆಯವರೂ ಕೂಡ ಗಮನಹರಿಸಿಲ್ಲ ಎಲ್ಲೋ ದೇವೇಗೌಡರು ಐಟಿಯವರ ಕಾಲು ಹಿಡಿದಿದ್ದಾರೆ ಅನ್ನಿಸುತ್ತದೆ ಎಂದು ಎ.ಮಂಜು ಕಿಡಿಕಾರಿದ್ದಾರೆ.