ಬೆಂಗಳೂರು(ಜೂನ್.12) ಐಎಂಎ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.

ಈ ಹಗರಣದಲ್ಲಿ ಐಎಂಎ ಕಂಪನಿಗೂ ಯಾವುದೇ ಸಂಬಂಧವಿಲ್ಲ. ಐಎಂಎ ಪ್ರಕರಣದಲ್ಲಿ ಸುಮ್ಮನೆ ನನ್ನ ಮೇಲೆ ಆರೋಪವನ್ನು ಮಾಡಲಾಗಿದೆ. ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿಯನ್ನು ಪಡೆಯುತ್ತೇನೆ ಎಂದಿದ್ದಾರೆ.

ನಾನು ಐಎಂಎಯಲ್ಲಿ ವ್ಯವಹಾರ ಮಾಡಿರುವುದು ನಿಜ. ಆದರೆ 2017ರ ಡಿಸೆಂಬರ್ ಗೆ ಮುಂಚೆ ಐಎಂಎ ಜತೆ ನನು ಯಾವುದೇ ಸಂಪರ್ಕ ಹೊಂದಿರಲಿಲ್ಲ. 13 ವರ್ಷದಿಂದ ಈ ಕಂಪನಿ ಇದೆ, 2017ರಲ್ಲಿ ನನಗೆ ಪರಿಚಯವಾಯಿತು. ನಾನು ಹರಿಶ್ಚಂದ್ರ ಅಲ್ಲ, ಆದರೆ ಮಾಹಿತಿ ಪಡೆದು ವರದಿ ಮಾಡಿ. ತಪ್ಪು ಮಾಡಿದ್ದರೆ ದಾಖಲೆ ಸಹಿತ ವರದಿ ಮಾಡಿ. ರಿಚ್ ಮಂಡ್ ಸರ್ಕಲ್ ನಲ್ಲಿ ನನ್ನ ಆಸ್ತಿ ಸೇಲ್ ಮಾಡಿದ್ದೆ, 2017ರ ಡಿಸೆಂಬರ್ ನಲ್ಲಿ ಐಎಂಎಗೆ ಆಸ್ತಿ ಮಾರಾಟ ಮಾಡಿದ್ದೆ. 9 ಕೋಟಿ 16 ಲಕ್ಷ ರೂ. ಗೆ ಐಎಂಎಗೆ ಆಸ್ತಿ ಮಾರಾಟ ಮಾಡಿದೆ. ಯಾವುದೇ ಕಪ್ಪು ಹಣ ಪಡೆದು ವ್ಯವಹಾರ ಮಾಡಿಲ್ಲ, ಕಾನೂನು ಪ್ರಕಾರವೇ ಎಲ್ಲಾ ವ್ಯವಹಾರ ನಡೆಸಿದ್ದೇನೆ ಎಂದಿದ್ದಾರೆ.

ಮೇ ತಿಂಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಲು 5 ಕೋಟಿ ಅಡ್ವಾನ್ಸ್ ಪಡೆದಿದ್ದೆ ಅದಕ್ಕೆ ಎಲ್ಲಾ ರೀತಿಯ ದಾಖಲಾತಿಗಳು ನನ್ನ ಹತ್ತಿರ ಇದೆ ಎಂದು ಹೇಳಿದ್ದಾರೆ.