ನವದೆಹಲಿ: 800 ಕೆ.ಜಿ ತೂಕದ, 670 ಪುಟಗಳ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಮಂಗಳವಾರ ಅನಾವರಣಗೊಳಿಸಿದರು.

ಗ್ರಂಥ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಸಂದರ್ಭ ನನಗೆ ಬಹಳ ವಿಶಿಷ್ಟವಾಗಿದೆ. ಏಕೆಂದರೆ ಎರಡು ದಶಕಗಳ ಹಿಂದೆ ಅಟಲ್ ಜೀ ಅವರು ಈ ದೇವಸ್ಥಾನದ ಶಿಲಾನ್ಯಾಸ ಮಾಡಿದ್ದರು. ಇದೀಗ ಅದೇ ದೇವಾಲಯದಲ್ಲಿ ಭಗವದ್ಗೀತೆ ಅನಾವರಣ ಮಾಡುವ ಸೌಭಾಗ್ಯ ನನಗೆ ದೊರೆತಿದೆ ಎಂದು ಹೇಳಿದರು.

ದೇಶ ವಿದೇಶಗಳಲ್ಲಿ ಅನೇಕ ಭಾಷೆಗಳಲ್ಲಿ ಭಗವದ್ಗೀತೆಯ ಅನುವಾದ ಮಾಡಲಾಗಿದೆ. ಬಾಲ ಗಂಗಾಧರ ತಿಲಕ್ ಅವರು ಜೈಲಿನಲ್ಲಿ ಕುಳಿತು ಭಗವದ್ಗೀತೆಯ ಸಾರವನ್ನೇ ಬರೆದಿದ್ದರು. ಅವರು ಮರಾಠಿ ಭಾಷೆಯಲ್ಲಿ ಜನತೆಗೆ ಭಗವದ್ಗೀತೆಯ ತಲುಪಿಸಿದ್ದರು. ಗುಜರಾತಿ ಭಾಷೆಯಲ್ಲೂ ಅನುವಾದ ಮಾಡಿದ್ದಾರೆ. ಭಗವದ್ಗೀತೆಯಲ್ಲಿ ಎಲ್ಲಾ ಗೊಮಲಗಳಿಗೂ ಉತ್ತರ ದೊರೆಯಲಿದೆ ಎಂದರು.

ದೆಹಲಿಯ ಇಸ್ಕಾನ್ ದೇವಾಲಯ ಮುದ್ರಿಸಿರುವ 800 ಕೆ.ಜಿ. ತೂಕದ, 670 ಪುಟಗಳನ್ನು ಹೊಂದಿರುವ ಈ ಗ್ರಂಥ, 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿದ್ದು, ವಿಶ್ವದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಕೀರ್ತಿಗೆ ಪಾತ್ರವಾಗಿದೆ. ವಾಟರ್ ಪ್ರೂಫ್ ಕಾಗದದ ಮೇಲೆ 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಲೇಪಿತ ಬಳಸಿ ಇಟಲಿಯ ಮಿಲಾನ್’ನಲ್ಲಿ ಮುದ್ರಿಸಲಾಗಿದೆ.