ಮುಂಬೈ(ಮಾ:16): ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದರೂ ಸಹ ಕೆಲವು ಅಡಚಣೆಗಳಿಂದಾಗಿ ಬಿಡುಗಡೆ ಮಾಡಲು ತಡವಾಗಿತ್ತು. ಆದರೆ ಇದೀಗ ಏಪ್ರಿಲ್ 12 ರಂದು ದೇಶಾದ್ಯಂತ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಮೋದಿ ಅವರ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದು,ಮೇರಿಕೋಮ್ ಚಿತ್ರದ ನಿರ್ದೇಶಕ ಉಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದ ಆರಂಭದಿಂದ 2014 ರಲ್ಲಿ ದೇಶದ ಪ್ರಧಾನಿಯಾಗುವ ಕತೆಯನ್ನು ಈ ಚಿತ್ರ ಹೊಂದಿದ್ದು,ಚಿತ್ರವನ್ನು ನೋಡಿದ ಎಲ್ಲರಿಗೂ ಹೊಸ ಸ್ಪೂರ್ತಿ ತುಂಬುವುದು ನಿಶ್ಚಿತ ಎಂದು ನಿರ್ದೇಶಕ ಉಮಂಗ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.