ನವದೆಹಲಿ(ಜ,25): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿಯಲು ಕಾಂಗ್ರೆಸ್ ದಿನಕ್ಕೊಂದು ಶಸ್ತ್ರಗಳನ್ನು ಬಳಸುತ್ತಿದೆ ಅದರಂತೆ ಪ್ರಿಯಾಂಕ ಗಾಂಧಿಯನ್ನು ಯುಪಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇನ್ನು ಪ್ರಿಯಾಂಕ ಎಂಟ್ರಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೆಲವು ಪಕ್ಷಗಳಿಗೆ ಕುಟುಂಬವೇ ಮುಖ್ಯವಾಗಿರುತ್ತದೆ ಎಂದು ಕುಟುಕಿದ್ದಾರೆ.

ಪ್ರಜಾಪ್ರಭುತ್ವವೆಂಬುದು ಬಿಜೆಪಿಯ ರಕ್ತನಾಳಗಳಲ್ಲಿ ಹರಿಯುತ್ತಿದೆ ಆದರೆ ಕೆಲವು ಪಕ್ಷಗಳಿಗೆ ಕುಟುಂಬವೇ ಮುಖ್ಯವಾಗಿದೆ ಆದರೆ ಬಿಜೆಪಿಗೆ ಮಾತ್ರ ಪಕ್ಷವೇ ಕುಟುಂಬ ಎಂದು ವ್ಯಂಗ್ಯವಾಡಿದ್ದಾರೆ.