ನವದೆಹಲಿ(ಜ18): ವಿಶ್ವದ ಶ್ರೀಮಂತ ಉದ್ಯಮಿ ಮತ್ತು ಮೈಕ್ರೋಸಾಪ್ಟ್ ನ ಸಂಸ್ಥಾಪಕ ಬಿಲ್ ಗೇಟ್ಸ್ ರೆಸ್ಟೋರೆಂಟ್ ಒಂದರ ಮುಂದೆ ಉಪಹಾರಕ್ಕಾಗಿ ಸಾಲಿನಲ್ಲಿ ಕಾಯುತ್ತ ನಿಂತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಂಪು ಸ್ವೆಟರ್ ದರಿಸಿ ಜನಸಾಮಾನ್ಯರಂತೆ, ಬಹಳ ತಾಳ್ಮೆಯಿಂದ ಕಾಯುತ್ತ ನಿಂತಿರುವ ಬಿಲ್‍ಗೇಟ್ಸ್ ಫೋಟೋಗೆ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿದ್ದು, 12 ಸಾವಿರ ಜನ ಶೇರ್ ಮಾಡಿದ್ದಾರೆ.

ಬರ್ಗರ್ ಪ್ರೇಮಿಯಾಗಿರುವ ಗೇಟ್ಸ್ ಸಿಯಾಟಲ್‍ನ ಡಿಕ್ನ ಡ್ರೈವ್ ಇನ್ ಎಂಬ ರೆಸ್ಟೋರೆಂಟ್ ಮುಂದೆ ನಿಂತು ಕಾಯುತ್ತಿದ್ದ ಫೋಟೋ ವೈರಲ್ ಆಗಿದೆ. ಜನಸಾಮಾನ್ಯರಂತೆ ಸರಧಿ ಸಾಲಿನಲ್ಲಿ ನಿಂತು ಬರ್ಗರ್ ಖರೀದಿ ಮಾಡಿದ ವಿಶ್ವದ ಕೋಟ್ಯಾಧಿಪತಿ ಬಿಲ್ ಗೇಟ್ಸ್ ನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿ ಎಷ್ಟು ಸಿಂಪಲ್ ಎಂದು ಕಾಮೆಂಟ್ಸ್ ಮಾಡಿದ್ದಾರೆ.