ನವದೆಹಲಿ(ಫೆ:12): ಏಕದಿನ ವಿಶ್ವಕಪ್ ಪಂದ್ಯ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ನೆಚ್ಚಿನ ತಂಡಗಳಲ್ಲಿ ಒಂದಾದ ಭಾರತ ತಂಡದಲ್ಲಿ ಆಯ್ಕೆಯನ್ನು ಜಟಿಲಗೊಳಿಸುವ ಸಾಧ್ಯತೆ ಇದೆ. ಮೊದಲು ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಗೊಳ್ಳಬೇಕಾಗಿರುವ ಬೆನ್ನಲ್ಲೇ ರಿಷಬ್ ಪಂತ್.ಹಾಗೂ ಅಜಿಂಕ್ಯ ರಹಾನೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮುನ್ಸೂಚನೆ ದೊರೆತಿದೆ.

ರಿಷಬ್ ಪಂತ್ ಅದ್ಭುತ ಫಾರ್ಮ್ ನಲ್ಲಿದ್ದಾರೆ,ಹಿಂದಿನ ಕಿವಿಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ,ತಂಡದ ಆಯ್ಕೆಯ ವೇಳೆ ಇವರ ಪ್ರದರ್ಶನ ಗಮನಿಸಲಿದ್ದೇವೆ,ಇನ್ನು ಅಜಿಂಕ್ಯ ರಹಾನೆ ಕೂಡಾ ಇತ್ತೀಚಿಗೆ ದೇಶೀಯ ಕ್ರಿಕೆಟ್ ಕೂಟದಲ್ಲಿ ಶ್ರೇಷ್ಠ ನಿರ್ವಾಹಣೆ ನೀಡಿದ್ದಾರೆ,ಕೆ ಎಲ್ ರಾಹುಲ್ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನಲೆಯಲ್ಲಿ ರಹಾನೆ ಹೆಸರು ಚಾಲ್ತಿಯಲ್ಲಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂ ಎಸ್ ಕೆ ಪ್ರಸಾದ್ ತಿಳಿಸಿದ್ದಾರೆ.